↑ Return to Pada Support

ಸಲಹೆಗಳು ಮತ್ತು ಅಡಚಣೆಗಳು

Pada Software Support Forums Pada Support ಸಲಹೆಗಳು ಮತ್ತು ಅಡಚಣೆಗಳು

This topic contains 0 replies, has 1 voice, and was last updated by  ganesh 5 years ago.

Viewing 1 post (of 1 total)
  • Author
    Posts
  • #27

    ganesh
    Participant

    ನಮಸ್ಕಾರ
    ಈಗ ನಿಮ್ಮ ಹೊಸ ಪದ ಡೌನಲೋಡ ಮಾಡುವಾಗ ತಪ್ಪಾಗುತ್ತಿದೆ ಎಂದು ನಿನ್ನೆ ಸಂದೇಶ ಕಳುಹಿಸಿದ್ದೆ.

    ಅಡಚಣೆಗಳು:
    3 ತರಹದ ತಂತ್ರಾಂಶದಲ್ಲಿ ಮೊದಲನೆ ತಂತ್ರಾಂಶ ಡೌನಲೋಡ್ ಆಗುವಾಗ 0 bytes ಎಂದು ತೋರಿಸುತ್ತಿತ್ತು. ಆದರೆ ಈಗ ಸರಿಯಾಗಿ ಆಗುತ್ತಿದೆ.
    2ನೇ ತಂತ್ರಾಂಶ ಡೌನಲೋಡ ಅಗುವಾಗ .exe ಆಗದೇ windows file ತರಹ ಡೌನಲೋಡ ಅಗುತ್ತದೆ. ನಂತರ ಆದರ extention .exe ಮಾಡಿಕೊಳ್ಳಬೇಕು. ನನಗೆ ಗಣಕಯಂತ್ರದ ಜ್ಞಾನವಿರುವುದರಿಂದ ನಾನು ಆದನ್ನು ರಿನೇಮ್ ಮಾಡಿಕೊಳ್ಳುತ್ತೇನೆ. ಆದರೆ ಗಣಕಯಂತ್ರದ ಜ್ಞಾನವಿಲ್ಲದವರಿಗೆ ಕಷ್ಟವಾಗಬಹುದು. ಆದ್ದರಿಂದ ಡೌನಲೋಡ್ ಆಗುವಾಗ .exe ತರಹ ಡೌನಲೋಡ್ ಆಗುವಂತೆ ಮಾಡಿದರೆ ಒಳ್ಳೆಯದು.
    ಹೆಲ್ಪ್ ಗೆ ಹೋದರೆ keyboard layout ಸರಿಯಾಗಿ ತೋರಿಸುವುದಿಲ್ಲ.
    IMEನಲ್ಲಿ ‘ರ’ಗೆ ‘ಮ’ ಒತ್ತು ಹಾಕಲು ನನಗೆ ಆಗಲಿಲ್ಲ. ಪದ ಎಡಿಟರ್ ನಲ್ಲಿ ಆಗುತ್ತದೆ.

    IME ಗೆ ಸಲಹೆಗಳು :
    1. ದೇವಾ ಎಂದು ಬರೆಯುವಾಗ ದೀರ್ಘಾಕ್ಷರ ಒತ್ತಬೇಕಾದರೆ ಶಿಫ್ಟ್ (‘A’) ಒತ್ತಬೇಕಾಗುತ್ತದೆ. ಅದರ ಬದಲು ‘v+a’ ಎಂದು ಸರಳ ಮಾಡಬಹುದೇ? (ಇದನ್ನು ಪದ ಮತ್ತು IME ಎರಡರಲ್ಲೂ ಮಾಡಿದರೆ ತುಂಬಾ ಒಳ್ಳೆಯದು)
    2. ರ್ಯ ಒತ್ತಬೇಕಾದರೆ ತುಂಬಾ rfya ಇಷ್ಟೊಂದು ಕಠಿಣವಾಗುತ್ತದೆ. ಅದರ ಬದಲು shift+f ಮಾಡಬಹುದೇ?

    ಸದ್ಯಕ್ಕೆ ಇಷ್ಟು ಬರೆದಿದ್ದೇನೆ. ದಯವಿಟ್ಟು ನನ್ನ ಸಲಹೆಗಳನ್ನು ಗಮನಿಸಿ. ಬದಲಾಯಿಸಬಹುದೇ ಎಂದು ತಿಳಿಸಿ. ಉತ್ತರಕ್ಕೆ ಕಾಯುತ್ತೇನೆ. ಏಕೆಂದರೆ ಕನ್ನಡದಲ್ಲಿ ಇದುವರೆಗೂ ಬರಹ ಬಿಟ್ಟರೆ ಬೇರೆ IME ಇಲ್ಲ. ನನ್ನ ಹತ್ತಿರ ಬರಹ ಇದೆ. ಆದರೆ ಬರಹ IME ಈಗ ಉಚಿತವಾಗಿಲ್ಲ. ನನ್ನ ಬಳಿ ಉಚಿತವಾದದ್ದು ಇರುವುದರಿಂದ, ಇಡೀ ಕನ್ನಡಿಗರಿಗೆ ನೀವು ಪದ IMEಯನ್ನು ಕೊಟ್ಟಿರುವುದು ತುಂಬಾ ಅನುಕೂಲವಾಗಿದೆ. ಅದರಲ್ಲೂ ನಾನು ಕೊಟ್ಟ ಸಲಹೆಗಳ ತರಹ ಪದ ಮತ್ತು IME ಬದಲಾದರೆ ಇನ್ನೂ ಒಳ್ಳೆಯದಾಗುತ್ತದೆ ಎಂದು ಅನಿಸುತ್ತದೆ.

    ನಿಮ್ಮ ಲೈಸೆನ್ಸ್ ನಲ್ಲಿ ನೀವು ವೈಯಕ್ತಿಕ ಉಪಯೋಗಕ್ಕಾಗಿ ಉಚಿತ ಎಂದು ಕೊಟ್ಟಿದ್ದೀರಿ. ನಾವು ಆಧ್ಯಾತ್ಮಿಕ ಸಂಸ್ಥೆಯಲ್ಲಿ ಇದನ್ನು ಉಪಯೋಗಿಸಬಹುದೇ?

     

    - ಗಣೇಶ ಕಾಮತ

Viewing 1 post (of 1 total)

You must be logged in to reply to this topic.