↑ Return to Pada Support

ಲಿನಕ್ಸ್‌ನಲ್ಲಿ ಪದ?

Pada Software Support Forums Pada Support ಲಿನಕ್ಸ್‌ನಲ್ಲಿ ಪದ?

This topic contains 0 replies, has 1 voice, and was last updated by  bnaravinda 5 years, 1 month ago.

Viewing 1 post (of 1 total)
  • Author
    Posts
  • #34

    bnaravinda
    Participant

    ನಮಸ್ಕಾರ ಲೋಹಿತ್‌ರವರಿಗೆ,

    ಮೊದಲಿಗೆ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು. ಜಾಲತಾಣದಲ್ಲಿ  ಪದವು ಲಿನಕ್ಸ್‌ ಆವೃತ್ತಿಯಲ್ಲಿಯೂ ಲಭ್ಯವಿದೆ ಎಂಬ ಮಾಹಿತಿ ಇದೆ. ಆದರೆ ಅದರ ಇಳಿಕೆ ಕೊಂಡಿ ಇಲ್ಲ. ನಾನು ಮಾಂಡ್ರಿವಾ ಬಳಸುತ್ತೇನೆ. ಅದರಲ್ಲಿ ಕನ್ನಡ ಬೆಂಬಲವಿದ್ದರೂ ಸುಲಲಿತವಾಗಿ ಬಳಸಲು IMEಯ ಕೊರತೆ ಇದೆ. ಅದರಲ್ಲಿ ಕನ್ನಡ ಕೀಲಿಮಣೆ ಇದ್ದರೆ ಕಗಪ ಕೀಲಿಮಣೆ ಬಳಸಿ ಅಭ್ಯಾಸವಿರುವ ನನಗೆ ಅದು ಕಬ್ಬಿಣದ ಕಡಲೆ ಎನಿಸುತ್ತಿದೆ. ಹಾಗಾಗಿ ಲಿನಕ್ಸ್‌ನ ಆವೃತ್ತಿ ಲಭ್ಯವಿದ್ದು ಅದು ಡೆಬಿಯನ್‌ ಅವತರಣಿಕೆಗಳಲ್ಲಿ ಕಾರ್ಯನಿರ್ವಹಿಸುವಂತಿದ್ದರೆ ತುಂಬಾ ಅನುಕೂಲವಾಗುತ್ತಿತ್ತು.ನನ್ನ ಪ್ರಮುಖ ಸಲಹೆ ಎಂದರೆ ನಿಮ್ಮ ಉದ್ದೇಶ ಪ್ರಧಾನವಾಗಿ ವಾಣಿಜ್ಯೋದ್ದೇಶದ ಬಳಕೆಯಲ್ಲದಿದ್ದಲ್ಲಿ ಲಿನಕ್ಸ್‌ನ ಅವತರಣಿಕೆಗಳಲ್ಲಿ ಇದನ್ನು ಲಭ್ಯಮಾಡಲು ಸಾಧ್ಯವಿದ್ದರೆ ಇದರ ಜನಪ್ರಿಯತೆ ಬಹಳ ಹೆಚ್ಚುತ್ತಿತ್ತು. ಏಕೆಂದರೆ ಬೇರೆ ಸೌಲಭ್ಯ ಲಭ್ಯವಿರದ ಸ್ಥಳಗಳಲ್ಲಿ ಬೇಗನೇ ಮಾನ್ಯತೆ ಹಾಗೂ ಜನಪ್ರಿಯತೆ ದೊರಕುತ್ತದೆ. ಅಲ್ಲದೇ ಲಿನಕ್ಸ್‌ ಮೂಲತಃ ಉಚಿತ ವಿತರಣೆಯ ಧ್ಯೇಯೋದ್ದೇಶದ್ದಾದುದರಿಂದ ಅಲ್ಲಿ ನಿಮ್ಮ ತಂತ್ರಾಂಶವು ಹೆಚ್ಚು ಸೂಕ್ತವೆನಿಸುತ್ತದೆ.

    ಮತ್ತೊಮ್ಮೆ ಅಭಿನಂದನೆಗಳು ಹಾಗೂ ಧನ್ಯವಾದಗಳು

    ಅರವಿಂದ ಬ ನ

Viewing 1 post (of 1 total)

You must be logged in to reply to this topic.